ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ’ಬಿಗ್‌ಬಾಸ್‌’ ತೊರೆದ ಕಮಲ್‌ ಹಾಸನ್‌: ನಟ ಶಿಂಬು ಹೊಸ ನಿರೂಪಕ? 

Last Updated 23 ಫೆಬ್ರುವರಿ 2022, 8:02 IST
ಅಕ್ಷರ ಗಾತ್ರ

ತಮಿಳಿನ ಸ್ಟಾರ್‌ ನಟ ಶಿಂಬು ತಮಿಳಿನ ‘ಬಿಗ್‌ ಬಾಸ್‌ –5’ ಕಾರ್ಯಕ್ರಮ ನಿರೂಪಿಸುವುದು ಬಹುತೇಕ ಖಚಿತ ಎಂದು ವರದಿಯಾಗಿದೆ.

ಈ ಹಿಂದೆ ಬಿಗ್‌ಬಾಸ್‌ ರಿಯಾಲಿಟಿ ಶೋ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ಸೂಪರ್ ಸ್ಟಾರ್ ನಟ ಕಮಲ್​ ಹಾಸನ್​ ಅವರು ನಿರೂಪಕನ ಸ್ಥಾನಕ್ಕೆ ವಿದಾಯ ಹೇಳಲು ತೀರ್ಮಾನಿದ್ದಾರೆ.

ಸದ್ಯ ಅವರು ’ವಿಕ್ರಮ್’ ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದು ಹಾಗೂ ತಮ್ಮ ರಾಜಕೀಯ ಪಕ್ಷದ ಕೆಲಸಗಳು ಇರುವುದರಿಂದ ಬಿಗ್‌ಬಾಸ್‌ ನಿರೂಪಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

ಕಮಲ್‌ ಹಾಸನ್‌ ಅವರ ಸ್ಥಾನಕ್ಕೆ ನಟ ಶಿಂಬು ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಅದಿಕೃತ ಪ್ರಕಟಣೆ ಮಾತ್ರ ಬಾಕಿ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಶಿಂಬು ಹೆಸರಿನ ಜತೆಯಲ್ಲಿ ನಟ ಶರತ್‌ ಕುಮಾರ್‌, ನಟಿ ರಮ್ಯಾ ಕೃಷ್ಣ ಅವರ ಹೆಸರುಗಳು ಚಾಲ್ತಿಯಲ್ಲಿ ಇದ್ದವು. ಅಂತಿಮವಾಗಿ ಶಿಂಬು ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT